Home » Latest Stories » ಯಶಸ್ಸಿನ ಕಥೆಗಳು » ನೋವಿನ ಸಮಯದಲ್ಲಿ ಶಕ್ತಿ ತುಂಬಿದ Boss Wallah…‌ ಸಮಗ್ರ ಕೃಷಿಯಿಂದ ಗೆದ್ದ ಯುವರೈತ..

ನೋವಿನ ಸಮಯದಲ್ಲಿ ಶಕ್ತಿ ತುಂಬಿದ Boss Wallah…‌ ಸಮಗ್ರ ಕೃಷಿಯಿಂದ ಗೆದ್ದ ಯುವರೈತ..

by Bharadwaj Rameshwar

ಕೈ ಕೆಸರಾದರೆ ಬಾಯಿ ಮೊಸರು  ಎಂಬ ಗಾದೆಯೊಂದಿದೆ. ಈ ಗಾದೆಯನ್ನು ಅಕ್ಷರಸ: ಸತ್ಯ ಮಾಡಿದ್ದಾರೆ ಈ ಕೃಷಿಕ. ತಮ್ಮ ಜಮೀನಿನಲ್ಲಿ ಸಮಗ್ರ ಕೃಷಿಯನ್ನು ಮಾಡಿ ಇಂದು ಕೈತುಂಬಾ ಹಣ ಸಂಪಾದನೆ ಮಾಡುತ್ತಿದ್ದಾರೆ  ಈ ಯುವ ರೈತ. ಇವರು ಹೈದರಬಾದ್‌ ಮೂಲದ ವಿನಯ್‌ ಕುಮಾರ್.‌ ಬಿಕಾಂ ಪದವೀಧರರಾಗಿರುವ ವಿನಯ್‌ ಮೊದಲು ಹಾರ್ಡ್‌ ವೇರ್‌ ಕಂಪೆನಿಯನ್ನು ಆರಂಭಿಸಿ ಬಳಿಕ ಹತ್ತು ವರ್ಷಗಳ ಕಾಲ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಾರೆ. 

 ಆದರೆ ಇವರಿಗೆ ಒಲವು ಇದ್ದಿದ್ದು ಕೃಷಿಯ ಕಡೆಗೆ. ಖಾಸಗಿ ಕಂಪೆನಿಯಲ್ಲಿ ಕೆಲಸದಿಂದ ಬೇಸತ್ತು, ಕೃಷಿಯಲ್ಲಿ ತೊಡಗಿಕೊಳ್ಳುವ ಒಲವು ತೋರುತ್ತಾರೆ. ತಾವು ಈಗಾಗಲೇ ಜಮೀನು ಹೊಂದಿದ್ದರೂ ಕಾರ್ಮಿಕರು, ಹವಾಮಾನ, ರೋಗ ಮತ್ತು ಜ್ಞಾನದ ಕೊರತೆಯಿಂದಾಗಿ ಅವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಅನಾರೋಗ್ಯ ಮತ್ತು ಹವಾಮಾನ ವೈಪರೀತ್ಯದಿಂದ ಇವರು ಸಾಕಿದ್ದ 40 ಕೋಳಿಗಳು (ನಾಟಿ ಕೋಳಿ) ಸಾವನ್ನಪ್ಪಿದವು.. ಹಾಗೂ 10,000 ಮೀನುಗಳು ಫೀಡ್‌ಗೆ ಹೊಂದಿಕೊಳ್ಳಲು ಸಾಧ್ಯವಾಗದೆ ಸತ್ತವು. ಇದರಿಂದ ಬಹಳ ನೋವುಂಟು ಮಾಡಿತು. ಆಗ ಇವರ ನೋವಿಗೆ ಶಕ್ತಿ ತುಂಬಿದೇ  Boss Wallah

ಶಕ್ತಿ ತುಂಬಿದ  Boss Wallah

ತಾವು ಕೃಷಿಯಲ್ಲಿ ಅಪಾರ ನಷ್ಟಕೊಂಡ ಬಳಿಕ ಇವರು Boss Wallah ಅನ್ನು ಡೌನ್‌ ಲೋಡ್‌ ಮಾಡಿಕೊಂಡು ಸಮಗ್ರ ಕೃಷಿ, ಜೇನುಸಾಕಣೆ, ಕುರಿ ಮತ್ತು ಮೇಕೆ ಸಾಕಣೆ, ಶೂನ್ಯ – ಬಂಡವಾಳ ಕೃಷಿ ಮತ್ತು ಹೈನುಗಾರಿಕೆಯ ಬಗ್ಗೆ ತಿಳಿದುಕೊಳ್ಳುತ್ತಾರೆ. ಸಮಗ್ರ ಕೃಷಿಗೆ ಸಿದ್ಧತೆ ಹೇಗಿರಬೇಕು? ಸಮಗ್ರ ಕೃಷಿಗೆ ಬಂಡವಾಳ ಮತ್ತು ಸರ್ಕಾರದ ಪ್ರಯೋಜನಗಳು, ಸಮಗ್ರ ಕೃಷಿ-ಸಂಬಂಧಿತ ಉಪ-ವ್ಯಾಪಾರಗಳು, ಸಮಗ್ರ ಕೃಷಿಯಲ್ಲಿ ಹಣ ಗಳಿಸುವುದು ಹೇಗೆ?  ಸಮಗ್ರ ಕೃಷಿಯಲ್ಲಿ ತಂತ್ರಜ್ಞಾನ ಮತ್ತು ನೀರಿನ ಅಗತ್ಯತೆ, ಸಮಗ್ರ ಕೃಷಿ, ರಸಗೊಬ್ಬರ ಮತ್ತು ಕಾಲೋಚಿತ ಗುಣಲಕ್ಷಣಗಳು, ಸಮಗ್ರ ಕೃಷಿ ಮಾರುಕಟ್ಟೆ, ಸುಸ್ಥಿರತೆ, ಬೆಳವಣಿಗೆ ಮತ್ತು ಸವಾಲುಗಳ ಬಗ್ಗೆ ಇವರು ಸಂಪೂರ್ಣವಾಗಿ ಮಾಹಿತಿ ಪಡೆದು ಇವರೂ ಸಮಗ್ರ ಕೃಷಿಯತ್ತ ಒಲವು ತೋರುತ್ತಾರೆ. 

ಸಮಗ್ರ ಕೃಷಿ ಅನುಸರಿಸಿದ ವಿನಯ್‌ ಕುಮಾರ್

 Boss Wallah ನಿಂದ ಪ್ರೇರಣೆಗೊಂಡು ಇವರು ಹೊಂದಿದ್ದ 26 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಮಾಡುತ್ತಿದ್ದಾರೆ. 70 ಬಗೆಯ ಸೊಪ್ಪು  ತರಕಾರಿಗಳು ಬೆಳೆಯುತ್ತಾರೆ. ಮೊದಲು 25 ಹಸುಗಳನ್ನು ಸಾಕುತ್ತಿದ್ದ ಇವರು ಇದೀಗ  62 ಹಸುಗಳನ್ನು ಸಾಕುತ್ತಿದ್ದಾರೆ. ಇದರೊಂದಿಗೆ ಜೇನು ಕೃಷಿ, ಕೋಳಿ ಸಾಕಣೆ, ಹಣ್ಣು, ತರಕಾರಿಗಳು, ಮತ್ತು ಮೀನು ಸಾಕಣೆ ಮಾಡುತ್ತಿದ್ದಾರೆ. ಇವರು ವರ್ಷಕ್ಕೆ ವರ್ಷಕ್ಕೆ ಹತ್ತು ಲಕ್ಷದವರೆಗೆ ಸಂಪಾದಿಸುತ್ತಿದ್ದರು. 

ವಿನಯ್‌ ಸಾಧನೆಗೆ ಕೃಷಿ ಇಲಾಖೆಯಿಂದಲೂ ಮೆಚ್ಚುಗೆ 

Boss Wallah ಎಲ್ಲಾ ಕೋರ್ಸ್‌ ಗಳನ್ನು ಇವರು  ಇಷ್ಟಪಡುತ್ತಿದ್ದಾರೆ. ಇದಲ್ಲದೆ ಈ ಮೊದಲೇ  Boss Wallah ನಿಂದ ಕೋರ್ಸ್‌ ಗಳನ್ನು ಕಲಿತುಕೊಂಡಿದ್ದ ಬೇರೆ ರೈತರಿಂದ ಕೂಡ ಪ್ರೇರಣೆ ಪಡೆಯುದ್ಧಾರೆ ಎನ್ನುತ್ತಾರೆ ವಿನಯ್‌ ಕುಮಾರ್‌.  ಇದಲ್ಲದೆ ಇವರ ಸಾಧನೆಗೆ ಕೃಷಿ ಇಲಾಖೆಯೂ  ಮೆಚ್ಚುಗೆ ವ್ಯಕ್ತಪಡಿಸಿದೆ. ಹಲವು ರೈತರು ಇವರ ಕೃಷಿ ಮಾರ್ಗದರ್ಶನಕ್ಕಾಗಿ ಬರುತ್ತಿದ್ದಾರೆ. 

ಮಾರುಕಟ್ಟೆ ಹೇಗೆ? 

ವಿನಯ್‌ ಅವರ ಪ್ರಸ್ತುತ  ತಮ್ಮ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಮತ್ತು ಅವುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಕೂಡ ಯೋಜನೆ ಹಾಕಿದ್ದಾರೆ. ಇದಲ್ಲದೆ ಕುರಿ ಮತ್ತು ಮೇಕೆ ಸಾಕಾಣಿಕೆ, ಬಾತುಕೋಳಿ ಸಾಕಣೆ, ಪಾರಿವಾಳ ಸಾಕಣೆ, ರೇಷ್ಮೆ ಕೃಷಿಯನ್ನು ಪ್ರಾರಂಭಿಸಲು ಅವರು ಯೋಜನೆ ಹಾಕಿದ್ದಾರೆ. 

ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಮತ್ತು ಸಮಗ್ರ ಕೃಷಿಯ ಮೂಲಕ ಉತ್ತಮ ಆದಾಯ ಗಳಿಸಬಹುದು. ರೈತರು ಸಮಗ್ರ ಕೃಷಿಯನ್ನು ಮಾಡುವ ಮೂಲಕ ಪ್ರತೀ ತಿಂಗಳು ಒಂದಲ್ಲ ಒಂದು ಬೆಳೆಯಿಂದ ಆದಾಯವನ್ನು ಪಡೆಯಬಹುದು ಎನ್ನುತ್ತಾರೆ ವಿನಯ್‌ ಕುಮಾರ್. ಇವರ ಕೃಷಿ ಸಾಧನೆ ಎಲ್ಲರಿಗೂ ಸ್ಪೂರ್ತಿದಾಯಕವಾಗಿದ್ದು, “ಮನಸ್ಸಿದ್ದರೆ ಮಾರ್ಗ‘ ಎನ್ನುವ ಇವರು ಕೃಷಿಯಲ್ಲಿ ಶ್ರಮ ವಹಿಸಿದರೆ ಅಧಿಕ ಲಾಭವನ್ನು ಪಡೆಯಬಹುದೆಂದು ತಮ್ಮ ಅನುಭವದಿಂದ ಹೇಳುತ್ತಾರೆ.

Related Posts

© 2025 bosswallah.com (Boss Wallah Technologies Private Limited.  All rights reserved.